
ಬೆಂಗಳೂರು- ಆಗಸ್ಟ್, 27,2019: ಸಾಮಾಜಿಕ ಹೋರಾಟಗಾರ, ಹಿರಿಯ ಸಮಾಜವಾದಿ ಚಿಂತಕರು, ಮಾನವ ಹಕ್ಕುಗಳ ಮುಂಚೂಣಿ ಹೋರಾಟಗಾರ ಹಾಗೂ ರಾಜಕೀಯ ಮುತ್ಸದ್ದಿ ಎ ಕೆ ಸುಬ್ಬಯ್ಯ ರ ನಿಧನ ರಾಜ್ಯದ ಜಿಂತನಾ ಹಾಗೂ ಹೋರಾಟ ಕ್ಷೇತ್ರಕ್ಕೆ ದೊಡ್ಡ ನಷ್ಷವನ್ನುಂಟು ಮಾಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆಯವರು ಸುಬ್ಬಯ್ಯರವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಎ.ಕೆ.ಸುಬ್ಬಯ್ಯ ನವರು ಪ್ರಾರಂಭದ ಕೆಲ ವರ್ಷಗಳಲ್ಲಿ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರೂ ಅದರಲ್ಲಿನ ವಿಭಜನವಾದ ತೀವ್ರಗಾಮಿ, ಹಿಂಸಾತ್ಮಕ ಹಾಗೂ ಕೋಮುವಾದದ ವಿಚಾರಗಳಿಂದ ಬೇಸತ್ತು ಹೊರಬಂದವರಾಗಿದ್ದಾರೆ. ನಂತರದಲ್ಲಿ ಎಲ್ಲಾ ರೀತಿಯ ಬಲಪಂಥೀಯ ಹಾಗೂ ಕೋಮುವಾದಗಳಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಾ, ದೇಶದ ಪ್ರಜಾಪ್ರಭುತ್ವ, ಜಾತ್ಯಾತೀತ ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಗಟ್ಟಿಗೊಳಿಸುವಲ್ಲಿ ನಿರಂತರ ಶ್ರಮಿಸಿದವರಾಗಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ, ಅಲ್ಪಸಂಖ್ಯಾತ ಹಾಗೂ ದಲಿತ, ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯಗಳನ್ನು ಮತ್ತು ಅನ್ಯಾಯಗಳನ್ನು ಖಡಾಖಂಡಿತವಾಗಿ ಪ್ರತಿಭಟಿಸುತ್ತಾ ನ್ಯಾಯಕ್ಕಾಗಿ ಹೋರಾಡಿದವರೊಂದಿಗೆ ಮುಂಚೂಣಿಯಲ್ಲಿದ್ದವರಾಗಿದ್ದಾರೆ. ವಕೀಲ ವೃತ್ತಿಯಲ್ಲಿ ಅಗ್ರಗಣ್ಯನೆನಿಸಿಕೊಂಡು, ಸಂವಿಧಾನ ತಜ್ಞರಾಗಿಯೂ ರಾಜ್ಯದ ಜನತೆಗೆ ತನ್ನ ಸೇವೆಯನ್ನು ಸಲ್ಲಿಸಿದ ಎ.ಕೆ. ಸುಬ್ಬಯ್ಯರ ನಿಧನ ರಾಜ್ಯದ ಜನತೆಗೆ ತೀವ್ರ ದುಃಖವನ್ನುಂಟು ಮಾಡಿದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments
Post a Comment