ಹಿಜಾಬ್ ವಿವಾದ : ಬಾಲಿಶತನ ಹಾಗೂ ಸಂವಿದಾನ ವಿರುದ್ದ ಹೇಳಿಕೆಯನ್ನು ನೀಡಿದ ಮೈಸೂರು-ಕೊಡಗು ಸಂಸದನ ವಿರುಧ್ಧ ಶಾಫಿ ಸಅದಿ ಆಕ್ರೋಶ

No comments


ಸೋಮವಾರಪೇಟೆ : ಇದು ಜ್ಯಾತ್ಯಾತೀತ ರಾಷ್ಟ್ರ , ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೆೇ ಆದ ಧರ್ಮವನ್ನು ಸಂಸ್ಕ್ೃತಿಯನ್ನು ಪಾಲಿಸಿ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಅಥವಾ ಅದರ ವಿರುಧ್ಧ ಮಾತನಾಡುವ ಅಧಿಕಾರ ಯಾವ ವ್ಯಕ್ತಿಗೂ ಇಲ್ಲ. ಆ ರೀತಿ ಮಾತನಾಡುವುದು ಸಂವಿಧಾಕ್ಕೆ ವಿರುಧ್ಧವಾಗಿದೆ. ಸಂವಿಧಾನದ ವಿರುದ್ಧ ಮಾತನಾಡಿ ದೇಶದ್ರೋಹವನ್ನು ಎಸಗಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿಯವರು ತೀವ್ರ ಆಕ್ರೇಶ ವ್ಯಕ್ತಪಡಿಸಿದ್ದಾರೆ.

 ಸಂವಿಧಾನವನ್ನು ತಿಳಿಯದ ಹಾಗೂ ಅದನ್ನು ಪಾಲಿಸಿದ ಯಾವೊಬ್ಬನಿಗೂ, ಸಂಸದನಾಗಲಿಕ್ಕೊ, ಮಂತ್ರಿಯಾಗಲಿಕ್ಕೂ, ಶಾಸಕನಾಗಲಿಕ್ಕೊ ಯಾವುದೇ ಅರ್ಹತೆಯಿಲ್ಲ ಎಂದರು.

ವಿವಸ್ತ್ರಧಾರಿಗಳಾದ ಮುನಿಗಳನ್ನೂ ಗೌರವಿಸುತ್ತಿರುವ ಈ ದೇಶದಲ್ಲಿ ಮೊಣಕಾಲ ವರೆಗಿನ ವಸ್ತ್ರ ಧರಿಸುವ ಹಾಗೂ ಹಿಜಾಬ್ ಧಾರಣೆಯ ಬಗ್ಗೆ ಮೂರ್ಖತನದ ಹೇಳಿಕೆ ನೀಡಿರುವ ಸಂಸದರು ತನ್ನ ಸ್ಥಾನಕ್ಕೆ ಚ್ಯುತಿ ತಂದುಕೊಂಡಿದ್ದಾರೆ.


ಧರ್ಮಪಾಲನೆಯನ್ನು ಮಾಡುವವರು ಮದರಸಕ್ಕೆ ಹೋಗಿ ಎನ್ನುವುದಾದರೆ ಹಣೆಗೆ ತಿಲಕವನ್ನಿಟ್ಟು, ಹಿಂದೂ ಧರ್ಮದ ಸಂಸ್ಕೃತಿಯನ್ನು ಪಾಲನೆ ಮಾಡಿ ಬರುವ ಎಷ್ಟೋ ವಿದ್ಯಾರ್ಥಿಗಳು ಶಾಲೆಗಳಲ್ಲಿದ್ದಾರೆ, ಧರ್ಮಪಾಲನೆಯನ್ನು ಶಾಲೆಯಲ್ಲಿ ಮಾಡಬಾರದೆಂದು ಅವರ ನಿಲುವಾಗಿದ್ದಲ್ಲಿ ಈ ವಿದ್ಯಾರ್ಥಿಗಳನ್ನು ಮಠಗಳಿಗೆ ಕಳುಹಿಸಲು ಸಾಧ್ಯವೇ?

ಹಿಂದೂ ರಾಷ್ಟ್ರದ ಬಗ್ಗೆ ಧ್ವನಿ ಎತ್ತುವ ಮೊದಲು ದೇಶದ ಇತಿಹಾಸವನ್ನು ಮೊದಲು ಅರಿಯಬೇಕು. ನೈಜ ಭಾರತೀಯರು ಯಾರು ಎಂಬುವುದರ ಬಗ್ಗೆ ಅರಿವಿರಬೇಕು. ತಮ್ಮ ಅಭಿವೃದ್ದಿಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದಿರುವಾಗ ರಾಜಕೀಯ ಮುಖಂಡರು ಧಾರ್ಮಿಕ ವಿಚಾರಗಳನ್ನು ಎಳೆದು ತಂದು ಕಿಡಿ ಹೊತ್ತಿಸುವುದನ್ನು ನಿಲ್ಲಿಸಿ ಅಭಿವೃಧ್ದಿಯ ಕಡೆ ಗಮನ ಕೊಟ್ಟು ದೇಶವನ್ನು ಮುನ್ನಡೆಸುವ ಕೆಲಸ ಮಾಡಬೇಕಿದೆ.
ಮಾನ್ಯ ಸಂಸದರು, ಇಂತಹ ಕೋಮು ಪ್ರಚೋದನೆ ನೀಡುವುದು ಈ ಮೊದಲಲ್ಲ. ಕೊಡಗು ಜಿಲ್ಲೆಗೆ ಸಿಗಬೇಕಾದ ಸವಲತ್ತುಗಳನ್ನು ಕೇಳಿ ಪಡೆಯಲು ನಾಲಿಗೆ ಚಲಿಸದ ಸಂಸದರು, ರಾಜಕೀಯ ಲಾಭಕ್ಕಾಗಿ ಈ ರೀತಿಯ ಮೂರ್ಖತನ, ಬಾಲಿಶತನದ ಹೇಳಿಕೆಯನ್ನು ನೀಡಿರುವುದು ಖಂಡನಾರ್ಹ ಎಂದು ಶಾಫಿ ಸಅದಿ ಕಿಡಿಕಾರಿದ್ದಾರೆ.

No comments

Post a Comment