ನೆಲ್ಯಹುದಿಕೇರಿ (web@timesofcoorg). ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಎರಡು ವರ್ಷಕ್ಕೊಮ್ಮೆ ನಡೆಸುತ್ತಿರುವ ಪ್ರತಿಭೋತ್ಸವ ಕಾರ್ಯಕ್ರಮದ ಕೊಡಗು ಜಿಲ್ಲಾ ಮಟ್ಟದ ಕಾರ್ಯಗಾರವು ನೆಲ್ಯಹುದಿಕೇರಿಯ ದಾರುನ್ನಜಾತ್ ಸಂಸ್ಥೆಯಲ್ಲಿ ನಡೆಯಿತು.
ಜಿಲ್ಲೆಯ ಡಿವಿಷನ್ , ಸೆಕ್ಟರ್, ಯೂನಿಟ್ ಗಳಲ್ಲಿ ಪ್ರತಿಭೋತ್ಸವ ನಡೆಯಲಿದ್ದು, ಈ ಸಂಬಂಧ ಕಾರ್ಯಕ್ರಮ ನಡೆಸುವ ಕುರಿತು ರೂಪುರೇಷೆಗಳನ್ನು ತಿಳಿಸುವ & ಚರ್ಚಿಸುವ ನಿಟ್ಟಿನಲ್ಲಿ ಕಾರ್ಯಗಾರ ಏರ್ಪಡಿಸಲಾಗಿತ್ತು.
ಜಿಲ್ಲಾ ನಾಯಕರಾದ ಜುನೈದ್ ಅಮ್ಮತ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಅಸ್ಕರ್ ಸಖಾಫಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಕನ್ವೀನರ್ ರಹೀಮ್ ಹೊಸತೋಟ ರಾಜ್ಯ ಸಮಿತಿಯಿಂದ ಬಿಡುಗಡೆಗೊಂಡ ಪ್ರತಿಭೋತ್ಸವ ನಿಯಮಾವಳಿಗಳನ್ನು & ರೂಪುರೇಷೆಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮಿಂದಗಲಿದ ಮರ್ಹೂಂ ಶೈಖುನಾ ಮಹ್ಮೂದ್ ಉಸ್ತಾದ್ ಅವರಿಗೆ ತಹ್ಲೀಲ್ ಹೇಳಿ ದುಆ ಮಾಡಲಾಯಿತು. ಜಿಲ್ಲಾ ಪ್ರತಿಭೋತ್ಸವ ಸಮಿತಿ ಪದಾಧಿಕಾರಿಗಳು & ಸದಸ್ಯರು, ಡಿವಿಷನ್ & ಸೆಕ್ಟರ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಪ್ರತಿಭೋತ್ಸವ ಸಮಿತಿ ಕೆಳಗಿನಂತಿವೆ :-
1. ಚೇರ್ ಮ್ಯಾನ್ - ಅಸ್ಕರ್ ಸಖಾಫಿ
ಕೊಟ್ಟಮುಡಿ
2. ಕನ್ವೀನರ್ - ರಹೀಮ್ ಹೊಸತೋಟ
3. ಫಿನಾನ್ಸ್ - ಅನಸ್ ಕೊಂಡಂಗೇರಿ
4. ಝುಬೈರ್ ಸಅದಿ ಮಾಲ್ದಾರೆ
5. ಜುನೈದ್ ನೆಲ್ಲಿಹುದಿಕೇರಿ
6. ರಫೀಖ್ ಲತೀಫಿ ಸುಂಟಿಕೊಪ್ಪ
7. ಶೌಕತ್ ಎಮ್ಮೆಮ್ಮಾಡು
8. ನಿಝಾಮ್ ಕಂಡಕ್ಕರೆ
9. ಇಬ್ರಾಹಿಂ ಮಾಸ್ಟರ್ ಕೊಂ.ಗೇರಿ
10. ಶಾಫಿ ಕುಂಜಿಲ
11. ರಶೀದ್ ಕಂಡಕ್ಕರೆ
12. ಜಲೀಲ್ ಅಮೀನಿ ಪಾಲಿಬೆಟ್ಟ
13. ಝಕರೀಯ ಕೊಂಡಂಗೇರಿ
14. ಉನೈಸ್ ಹೊಸತೋಟ
15. ಅಝೀಝ್ ಕುಂಜಿಲ
ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿಯಿಂದ 2021 ನವೆಂಬರ್ 20,2 1ರಂದು ಹುಂಡಿಯ ಮರ್ಕಝ್ ಸಂಸ್ಥೆಯಲ್ಲಿ ನಡೆಯಲಿದೆ.
No comments
Post a Comment