ಶನಿವಾರಸಂತೆ (web@timesofcoorg) : ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿನಿ ಈ ಸಾಲಿನಲ್ಲಿ 625 ಅಂಕಗಳನ್ನು ಪಡೆದು ತೇರ್ಗಡೆಯಾದ ಜನಿತಾಗೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ) ವತಿಯಿಂದ ಸೆಕ್ರೇಡ್ ಹಾರ್ಟ್ ಶಾಲೆಯಲ್ಲಿ ಸನ್ಮಾನಿಸಲಾಯಾತು.
ಸನ್ಮಾನ ಮಾಡಲಾದ ಸಮಯದಲ್ಲಿ ಹಿರಿಯ ಮುಖಂಡ ಆದಿಲ್ ಪಾಷಾ ಮಾತನಾಡಿ ನಮ್ಮ ಶನಿವಾರಸಂತೆಗೆ ಮತ್ತು ಕೊಡಗಿಗೆ ಹೆಮ್ಮೆ ತಂದಿರುವ ಜನನಿಗೆ ಅಭಿನಂದನೆ ಮತ್ತು ಧನ್ಯವಾದ ಅರ್ಪಿಸಿದರು ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಶನಿವಾರಸಂತೆ ಹೋಬಳಿ ಅಧ್ಯಕ್ಷರಾದ ಆನಂದ ರವರು ಮಾತನಾಡಿ ಜನಿತ ಎಂಬ ವಿದ್ಯಾರ್ಥಿ ಉತ್ತಮವಾಗಿ ಓದಿಕೊಂಡು ಉತ್ತಮ ರೀತಿಯಲ್ಲಿ ಬರೆದು ಈ ಶಾಲೆಗೆ ಮತ್ತು ತಮ್ಮ ಶನಿವಾರಸಂತೆಗೆ ಹೆಮ್ಮೆ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಹಾಗೆಯೇ ಈ ವಿದ್ಯಾರ್ಥಿನಿಗೆ ಉತ್ತಮವಾದ ವಿದ್ಯಾಭ್ಯಾಸದ ಕೊಟ್ಟಂತಹ ಸೇಕ್ರೇಡ್ ಹಾರ್ಟ್ ಶಾಲೆಯ ಎಲ್ಲ ಟೀಚರ್ಸ್ ಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು ಜನನಿ ಎಂಬ ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿ ದರು..ಇದೆ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರಿಂದ *ಜನಿತ* ಎಂಬ ವಿದ್ಯಾರ್ಥಿಗೆ ಪ್ರಶಂಸಾ ಪತ್ರವನ್ನು ಸನ್ಮಾನ ಸಂದರ್ಭದಲ್ಲಿ ಕೊಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿ ಜನಿತ ಅವರ ತಂದೆ ಮಹೇಶ್ ರವರು ಮಗಳಿಗೆ ಸನ್ಮಾನ ಮಾಡಿದ ಕರವೇ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ರಾದ ಫ್ರಾನ್ಸಿಸ್ ಡಿ ಸೋಜ ರವರು ಮತ್ತು ಹಿರಿಯ ಮುಖಂಡರು ಆದಿಲ್ ಪಾಷ ರವರು ಮತ್ತು ಕರವೇ ಹೋಬಳಿ ಅಧ್ಯಕ್ಷರಾದ ಆನಂದ್ ಮತ್ತು ಶನಿವಾರಸಂತೆ ಆಟೋ ಘಟಕದ ಮಾಜಿ ಅಧ್ಯಕ್ಷರಾದ ದಿನೇಶ್ ರವರು ಮತ್ತು ಅಬ್ದುಲ್ ರಝಾಕ್ ಮತ್ತು ಅಬ್ದುಲ್ ಶುಕೂರ್ ಮತ್ತು ಜನಿತ ರವರ ವಿದ್ಯಾರ್ಥಿಯ ತಂದೆ ಮಹೇಶ್ ಮತ್ತುಜನಿತ ವಿದ್ಯಾರ್ಥಿನಿಯ ತಾಯಿ ದಿವ್ಯಜ್ಯೋತಿ ಮತ್ತು ಸೇಕ್ರೆಡ್ ಹಾರ್ಟ್ ಶಾಲೆಯ ಫಾದರ್ ಸಬಾಸ್ಟಿನ್ ಮೈಕಲ್ ರವರು ಮತ್ತು ಸೆಕ್ರೇಡ್ ಹಾರ್ಟ್ ಶಾಲೆಯ ಟೀಚರ್ಸ್ ಗಳು ಇನ್ನಿತರರು ಉಪಸ್ಥಿತರಿದ್ದರು.
No comments
Post a Comment