ಕೊಳಕೇರಿಯಲ್ಲಿ ಪೋಷಣ ಮಾಸಾಚರಣೆ ಅರಿವು ಕಾರ್ಯಕ್ರಮ

No comments

 

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (web@timesofcoorg) :ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಚಪ್ಪೆಂಡಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪೋಷಣ ಮಾಸಾಚರಣೆ ಹಾಗೂ ಮಾತೃವಂದನಾ ಅರಿವು ಕಾರ್ಯಕ್ರಮವು ನಾಪೋಕ್ಲು ಗ್ರಾಮ ಪಂಚಾಯತ್ ಸದಸ್ಯ ಕೆ. ವೈ. ಅಶ್ರಫ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಉಮಾಮಹೇಶ್ವರಿ ಯವರು ಮಾತನಾಡಿ ಗರ್ಭಿಣಿಯರು  ಸ್ಥಳೀಯವಾಗಿ ಸಿಗುವಂತಹ ಪೌಷ್ಟಿಕ ಆಹಾರವನ್ನು ಬಳಸಿ ಶಿಸುವಿನ ಉತ್ತಮ ಬೆಳವಣಿಗೆ ಮತ್ತು ರಕ್ತಹೀನತೆ ಬಗ್ಗೆ ಜನರಿಗೆ ಅರಿವು ಮೂಡಿಸಿದರು.

ಮಾತೃವಂದನಾ ಯೋಜನೆಗೆ ಗರ್ಭಿಣಿಯರು ಮೊದಲು ಅರ್ಹ ಪಲಾನುಭವಿಗಲಾಗಿದ್ದು ಇವರಿಗೆ 5ಸಾವಿರ ರೂಪಾಯಿಗಳು 3ಕಂತುಗಳಲ್ಲಿ ಅವರ ಖಾತೆಗೆ ನೇರ ಜಮೆ ಯಾಗುತ್ತದೆಯೆಂದು ಅಂಗನವಾಡಿ ಕಾರ್ಯಕರ್ತೆ ಕೃತಿಕಾ ವಿವರರಿಸಿದರು.    

ಅದೇ ರೀತಿ ಕೊಳಕೇರಿ ಗ್ರಾಮದ ವಿವಿಧ ಕಡೆಯ ಅಂಗನವಾಡಿ ಕಾರ್ಯಕರ್ತೆಯರು ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ಹಾಗೂ ಕೋವಿಡ್ ರೋಗ ನಿಯಂತ್ರಣದ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ಪಂಚಾಯತ್ ಸದಸ್ಯ  ಆಶ್ರಫ್ ಪೋಷಣ ಮಸಾಚರಣೆಯ ಬಗ್ಗೆ ಮಾತನಾಡಿದರು.

ನಂತರದಲ್ಲಿ ಕೊಳಕೇರಿ ಗ್ರಾಮದಲ್ಲಿರುವ ಗರ್ಭಿಣಿ ಬಾಣಂತಿಯರಿಗೆ ಸೀಮಂತ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಚಪ್ಪೆಂಡಡಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಹೇಮಾವತಿ ಅಂಗನವಾಡಿ  ಕಾರ್ಯಕರ್ತೆಯರಾದ ಶ್ವೇತ, ಕೃತಿಕಾ, ಗೀತಾ, ಶಾಂತಿ,ಸಫ್ರಿನಾ ಹಾಗೂ ಆಶಾಕಾರ್ಯಕರ್ತೆಯಾರಾದ ದಮಯಂತಿ, ಗೀತಾ ,ಮತ್ತಿತರರು ಇದ್ದರು.

No comments

Post a Comment