ನಾಳೆ ಎಸ್ಸೆಸ್ಸೆಫ್ ಕೊಡಗು ವತಿಯಿಂದ ಸುಂಟಿಕೊಪ್ಪದಲ್ಲಿ ಸುಹ್ಬಾ ಮೀಟ್

No comments

 


 ಮಡಿಕೇರಿ (web@timesofcoorg) :ಧಾರ್ಮಿಕ ಶಿಕ್ಷಣ ಪಡೆಯದೆ ಲೌಕಿಕ ಶಿಕ್ಷಣ ಮಾತ್ರ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಧಾರ್ಮಿಕ ವಿಜ್ಞಾನ ನೀಡುವ ಸಲುವಾಗಿ ಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮವಾಗಿದೆ "ಸುಹ್ಬಾ". ಇದನ್ನು ವ್ಯವಸ್ಥಾಪಿತವಾಗಿ ಜಾರಿಗೊಳಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲು ಕೊಡಗು ಜಿಲ್ಲೆಯ "ಸುಹ್ಬಾ ಮೀಟ್"12-8-2021(ನಾಳೆ)ಬೆಳಿಗ್ಗೆ 11 ಗಂಟೆಗೆ SSF ಕೊಡಗು ಜಿಲ್ಲಾ ಅಧ್ಯಕ್ಷರಾದ ಶಾಫಿ ಸಅದಿಯವರ ಅಧ್ಯಕ್ಷತೆಯಲ್ಲಿ ಸುಂಟಿಕೊಪ್ಪದ ಮದ್ರಸ ಹಾಲ್ ನಲ್ಲಿ ನಡೆಯಲಿದೆ.ಕರ್ನಾಟಕ ರಾಜ್ಯ ಸಮಿತಿ ದಅವಾ ಕಾರ್ಯದರ್ಶಿ ಗಳಾದ ಮುಸ್ತಫಾ ನಯಿಮಿ ಉಸ್ತಾದರು ತರಗತಿ ನಡೆಸಲಿದ್ದಾರೆ

ಈ  ಸಭೆಯಲ್ಲಿ ಜಿಲ್ಲಾ,ಡಿವಿಷನ್, ಸೆಕ್ಟರ್ ಗಳ ದಅವಾ ಕಾರ್ಯದರ್ಶಿಗಳು ಮತ್ತು ಕನ್ವೀನರ್‌ಗಳು ಹಾಗೂ ಈ ಘಟಕಗಳ ಮುಖ್ಯ ಪದಾಧಿಕಾರಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಎಸ್ಎಸ್ಎಫ್  ಕೊಡಗು ಜಿಲ್ಲಾ ದ‌ಅವಾ ಕಾರ್ಯದರ್ಶಿ ರಫೀಕ್ ಲತೀಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments

Post a Comment