ನಾಪೋಕ್ಲು ವಾಹನ ಚಾಲಕ ಮತ್ತು ಮಾಲಿಕರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ

No comments

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು (web@timesofcoorg) :ಸ್ಥಳೀಯ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಾಪೋಕ್ಲುವಿನ ಮಾರುಕಟ್ಟೆ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾರತೀಯ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಡಾ. ಸಣ್ಣುವಂಡ ಕಾವೇರಪ್ಪ ನವರು ದ್ವಜಾರೋಹಣವನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು ನಮ್ಮ ರಾಷ್ಟ್ರದ ನಾಯಕರು ನಮಗೆ ಸ್ವಾತಂತ್ರ್ಯವನ್ನು ಗಳಿಸಿ ಕೊಟ್ಟಿದ್ದಾರೆ ಇದನ್ನು ಹುಳಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣ ಪ್ರತಿಯೊಬ್ಬರ ಗುರಿಯಾಗ ಬೇಕು ನಮ್ಮ ದೇಶವು ಮಂದುವರಿಯಬೇಕಾದರೆ ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು ಅದಕ್ಕಾಗಿ ಉತ್ತಮ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಹಾರಿಸಿ ಕಳುಹಿಸಬೇಕು ಎಂದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಗುಣಗಾನ ಮಾಡಿದರು.ಹಿರಿಯರು ದೊರಕಿಸಿಕೊಟ್ಟ ಈ ಸ್ವಾತಂತ್ರ್ಯವನ್ನು ಉಳಿಸಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಅಲ್ಲದೆ ದೇಶವು ಇಂದು ಮಾರಕ ರೋಗ ಕೊರೊನಾದಿಂದ ತತ್ತರಿಸಿಹೋಗಿದ್ದು ಇದರ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಗಳಿಗೆ ಈ ಸಂದರ್ಭದಲ್ಲಿ ಅವರು ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್,ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಕೆ. ಕೆ. ಲೋಕೇಶ್, ಸಹಕಾರ್ಯದರ್ಶಿ ಕೆ. ಎಂ. ಝಕರಿಯ, ಖಜಾಂಚಿ ಸಂಪತ್, ಸಲಹೆಗಾರ ದುಗ್ಗಳ ಸದಾನಂದ, ಮಾಜಿ ಅಧ್ಯಕ್ಷ ಕೆ. ಎಂ. ರಮೇಶ್ ಹಾಗೂ ಸಂಘದ  ಸದಸ್ಯರು ಮತ್ತಿತರರು ಇದ್ದರು .



No comments

Post a Comment