ನಾಪೋಕ್ಲು - ಅಂಗಡಿಯಿಂದ ಖರೀದಿಸಿದ ಅಡುಗೆ ಎಣ್ಣೆ ಪ್ಯಾಕೆಟ್ ನಲ್ಲಿ ಮೇಣದಬತ್ತಿಯ ಚೂರುಗಳು ಪತ್ತೆ

No comments

ನಾಪೋಕ್ಲು (Times Of Coorg) :ಇಲ್ಲಿಗೆ ಸಮೀಪದ ಬೇತು ರಸ್ತೆಯ ಅಂಗಡಿಯೊಂದರಿಂದ ಇಲ್ಲಿನ ಸೈಕಲ್ ರಿಪೇರಿ ಮಾಡುವ ಬಿ.ಆರ್. ಎಲಿಅಣ್ಣ ಎಂಬುವವರು ನೆನ್ನೆ ದಿನಾಂಕ 10.11.2020 ರಂದು ಸನ್ ಪವರ್ (sun power )ಎಂಬ ಹೆಸರಿನ ಅಡುಗೆ ಎಣ್ಣೆ ಖರೀದಿಸಿದ್ದು ಮನೆಗೆ ಹೋಗಿ ಅಡುಗೆ ಮಾಡಲು ಉಪಯೋಗಿಸುವ ಸಂದರ್ಭದಲ್ಲಿ ಎಣ್ಣೆಯಲ್ಲಿ ಮೇಣದಬತ್ತಿಯ ಚೂರುಗಳು ಕಾಣಿಸಿಕೊಂಡಿದ್ದು ಕಂಡು ಆತಂಕಕ್ಕೆ ಒಳಗಾಗಿ ಈ ದಿನ ಅಂಗಡಿಯವರ ಗಮನಕ್ಕೆ ತಂದಾಗ ನಮಗೆ ಗೊತ್ತಿಲ್ಲ ಕಂಪನಿಯವರು ನಮಗೆ ಸಪ್ಲೈ ಮಾಡುತ್ತಾರೆ ಎಂದಿದ್ದಾರೆ. ಆದರೂ ಬಿಡದ ಎಲಿಯಣ್ಣನವರು ಅದೇ ಹೆಸರಿನ ಇನ್ನೊಂದು ಪ್ಯಾಕೆಟ್ ಅಲ್ಲಿಂದ ಖರೀದಿಮಾಡಿ ಅಲ್ಲಿಂದಲೇ ಒಡೆದು ನೋಡಿದಾಗ ಅದರಲ್ಲೂ ಮೇಣದ ಬತ್ತಿಯ ಚೂರುಗಳ ಹಾಗೆ ಕಂಡಿದೆ. ಅದಲ್ಲದೆ ಈಗ ಅಡುಗೆ ಎಣ್ಣೆಗೆ 120 ರಿಂದ 130 ರೂಪಾಯಿ  ಲೀಟರಿಗೆ ದುಬಾರಿ ಬೆಲೆ ಇದ್ದು ಗ್ರಾಹಕರು ಖರೀದಿಸಲು ಇಂದು ಮುಂದು ನೋಡುವಸಮಯದಲ್ಲಿ ಈ ತರ  ಕಲಬೆರೆಕೆಯಿಂದ ಮಾರಕ ರೋಗಬಂದು ಪ್ರಾಣಹಾನಿ ಸಂಭವಿಸಿದರೂ ಸಂಶಯವಿಲ್ಲ ಎಂದ ಅವರು ಕೂಡಲೇ ಸಂಬಂಧಪಟ್ಟ ಇಲಾಖೆಯವರು    ಹೆಚೆತ್ತುಕೊಂಡು ಈ ತರಹದ ನಕಲಿ ಕಲಬೆರೆಕೆ ಎಣ್ಣೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ.




No comments

Post a Comment