ನಾಪೋಕ್ಲುವಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗ್ರಾಮ ಪಂಚಾಯಿತಿ ಮತ್ತು ಆಟೋ ಚಾಲಕ ಸಂಘದ ಸಹಯೋಗದಲ್ಲಿ ಸ್ವಚತೆ ಬಗ್ಗೆ ಜನಜಾಗೃತಿ

No comments

ವರದಿ:  ಹಾರಿಸ್ ನಾಪೋಕ್ಲು
ನಾಪೋಕ್ಲು  (Times Of Coorg): 150ನೇ ಗಾಂಧಿ ಜಯಂತಿ ಪ್ರಯುಕ್ತ ನಾಪೋಕ್ಲುವಿನಲ್ಲಿ ಗ್ರಾಮ ಪಂಚಾಯಿತಿ ಮತ್ತು ಆಟೋ ಚಾಲಕರ ಸಂಘದ ಸಹಯೋಗದಲ್ಲಿ ಹಳೆ ತಾಲೂಕು ಜಂಕ್ಷನ್ ನಿಂದ ನಾಪೋಕ್ಲು ಮಾರುಕಟ್ಟೆ ವರೆಗೆ ಕೊರೊನಾ ಮುಂಜಾಗ್ರತೆ ಪ್ಲಾಸ್ಟಿಕ್ ಬಳಸದಂತೆ ಮತ್ತು ಸ್ವಚ್ಛತೆ ಬಗ್ಗೆ ಹರಿವು ಮೂಡಿಸುತ್ತಾ ಜಾಥಾ ನಡೆಸಲಾಯಿತು.

ಹಳೆ ತಾಲೂಕು ಜಂಕ್ಷನ್ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮುರಳಿ ಕರುಂಬಯ್ಯ ಮಾತ್ಮಗಾಂದಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಜಾತಾ ಪ್ರಾರಂಭಿಸಲಾಯಿತು.

ಹಳೆ ತಾಲೂಕಿನಿಂದ ಪ್ರಾರಂಭವಾದ ಜಾತ ನಾಪೋಕ್ಲು ಪಟ್ಟಣ ತಲುಪಿದ ಸಂದರ್ಭ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಜಿಲ್ಲಾ ಪಂಚಾಯತ್ ಸದಸ್ಯ ಮುರಳಿ ಕರಂಬಮಯ್ಯ    ಮಾತನಾಡಿ ನಮ್ಮ ದೇಶಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಅಹಿಂಸೆ ಮೂಲಕ ಪ್ರಮುಖ ಪಾತ್ರ ವಹಿಸಿದ್ದ ಮಹಾತ್ಮ ಗಾಂಧೀಜಿ ಕಂಡಂತಹ ಕನಸಾಗಿದೆ ಸ್ವಚ್ಛ ಭಾರತ ಎಂಬುವುದು.

ಆದ್ದರಿಂದ ಈ ದಿನ ನಾವು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುತ್ತಿದ್ದು,
ಸ್ವಚ್ಛತೆಗೆ ಬರಿ ಗ್ರಾಮ ಪಂಚಾಯಿತಿಯನ್ನು ಅವಲಂಬಿಸದೆ  ಅವರವರ ಅಂಗಡಿ-ಮುಂಗಟ್ಟು ಮನೆಯ ಸುತ್ತಮುತ್ತ ಸ್ವಚ್ಛಗೊಳಿಸುವ ಮೂಲಕ ಸಹಕರಿಸಿದರೆ ಮಾತ್ರ ಗಾಂಧೀಜಿ ಕಂಡಂತಹ ಸ್ವಚ್ಛ ಭಾರತ ಕನಸು ನನಸಾಗಲು ಸಾಧ್ಯ.
ಸರಕಾರದಿಂದ ಪ್ರತಿ ಅಂಗಡಿ ಮನೆಯ ಸುತ್ತ  ಸ್ವಚ್ಛ ಪಡಿಸಲು ಸರಕಾರದಿಂದ ಯಾವುದೇ ಅನುದಾನವಿಲ್ಲ
ಕೊರೋನಾ ಮಹಾಮಾರಿ ಹೆಚ್ಚಾಗಲು  ಅಸುಚಿತ್ವ ಕೂಡ  ಕಾರಣವಾಗಿದ್ದು,ಆದರಿಂದ ಸಾರ್ವಜನಿಕರು  ಮುಂಜಾಗ್ರತೆ ವಹಿಸಿ ತಮ್ಮ ಮನೆಯವರೊಂದಿಗೆ ತಮ್ಮ ತಮ್ಮ ಸಹಪಾಠಿಗಳಲ್ಲಿ ರೋಗಹರಡದಂತೆ ತಮ್ಮಿಂದ ಬೇರೆಯವರ ಜೀವ ಹಾನಿಯಾಗದಂತೆ ಕಾಳಜಿ ವಹಿಸಬೇಕಾಗಿ ಮನವಿ ಮಾಡಿದರು.

ನಾಪೋಕ್ಲು ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಮದನ ಮೋಹನ ಮಾತನಾಡಿ ನಾಪೋಕ್ಲು  ವ್ಯಾಪ್ತಿಯಲ್ಲಿ ಕೊರೋನಾ ಮಹಾಮಾರಿ ದಿನೇದಿನೇ ಹೆಚ್ಚಾಗುತ್ತಿದ್ದು ರೋಗಲಕ್ಷಣಗಳು ಇದ್ದವರು ನಿರ್ಲಕ್ಷಿಸದೆ ಅಪಪ್ರಚಾರಕ್ಕೆ ಕಿವಿಕೊಡದೆ ನಿರ್ಭಯದಿಂದ ಬಂದು ಪರೀಕ್ಷೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋನ್ದಕ್ಕಿ ಮಾತನಾಡಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ನಾಪೋಕ್ಲು ವತಿಯಿಂದ ಸ್ವಚ್ಛ ಭಾರತ್ ಮಿಷನ್ ಮತ್ತು ನಿತ್ಯೋತ್ಸವ ಸ್ವಚ್ಚಾವೋತ್ಸವ ಮಾಸಿಕ ಆಚರಣೆ ಕಾರ್ಯಕ್ರಮ ಪ್ರಯುಕ್ತ
ಅಕ್ಟೋಬರ್ ಈ ದಿನದಿಂದ ಅಂದರೆ  2ರಿಂದ 30ರ ತನಕ ಸ್ವಚ್ಛತೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಯುತ್ತದೆ.

ಪಟ್ಟಣದ ಅಂಗಡಿ ಮತ್ತು ಹೋಟೆಲ್ ಮಾಲೀಕರು ಕಸವನ್ನು ವಿಂಗಡಿಸಿ ಪಂಚಾಯತಿಯ ಕಸ ವಿಲೇವಾರಿಯ ವಾಹನಕ್ಕೆ ನೀಡಬೇಕು.ಕೆಲವು ವರ್ತಕರು ರಸ್ತೆ ಬದಿಯಲ್ಲಿ ಕಸ ಸುರಿಯುತ್ತಿದ್ದು ನಮ್ಮ ಗಮನಕ್ಕೆ ಬಂದಿದ್ದು ,ಇದು ಮುಂದುವರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಅದಲ್ಲದೆ ಸರ್ಕಾರದ ನಿಯಮದಂತೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟಕ್ಕೆ ಅವಕಾಶವಿಲ್ಲ.

ಈಗಾಗಲೇ ಇದರ ಬಗ್ಗೆ ಹಲವು ಬಾರಿ ನೋಟಿಸ್ ನೀಡಿದ್ದು ಇನ್ನು ಮುಂದೆ ಪ್ಲಾಸ್ಟಿಕ್ ಮಾರಾಟ ಬಳಕೆ ಕಂಡುಬಂದಲ್ಲಿ 1 ಸಾವಿರದಿಂದ 25 ಸಾವಿರ ರೂ ವರೆಗೆ ದಂಡ ವಿಧಿಸಲಾಗುವುದು ಆದ್ದರಿಂದ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು.

ನಾಪೋಕ್ಲು ಠಾಣಾಧಿಕಾರಿ ಕಿರಣ್ ಆರ್, ಮಾತನಾಡಿ ನಾಪೋಕ್ಲು ಪಟ್ಟಣದ ರಸ್ತೆಗಳು ತುಂಬಾ ಕಿರಿದಾಗಿದ್ದು,
ಟ್ರಾಫಿಕ್ ಸಮಸ್ಯೆ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿದ್ದು
ಪಟ್ಟಣದ ವರ್ತಕರು ದಿನಪೂರ್ತಿ ಪಟ್ಟಣದಾದ್ಯಂತ ನಿಲುಗಡೆ ಮಾಡುತ್ತಿದ್ದು, ಅಂಗಡಿ ಮಾಲೀಕರಿಗೆ ಶೀಘ್ರದಲ್ಲೇ ಇದರ ಬಗ್ಗೆ ನೋಟೀಸು ನೀಡಿ ಸ್ಪಂದಿಸದಿದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹಾಗೂ ನಾಪೋಕ್ಲು ಪಟ್ಟಣದಲ್ಲಿ ವಾಹನ ನಿಲ್ದಾಣ ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ ಮತ್ತು ಅಪ್ರಾಪ್ತ ಯುವಕರು ವಾಹನ ಚಲಾಯಿಸುವುದು,  ಕಂಡುಬಂದಲ್ಲಿ
ಅಂತ ವಾಹನವನ್ನು ವಶಕ್ಕೆ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರಲ್ಲದೆ.

ನಾಪೋಕ್ಲುವಿನ ರಸ್ತೆ ತುಂಬಾ ಕಿರಿದಾಗಿರುವುದರಿಂದ ವಾಹನ ಸವಾರರು ಕೂಡ ಇದನ್ನರಿತು ಪೊಲೀಸ್ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡದೆ ಸಹಕರಿಸಬೇಕಾಗಿ ಮನವಿ ಮಾಡಿದರು.
ಜಾತ ಕೊನೆಗೊಂಡ ನಂತರ ಮಾರುಕಟ್ಟೆ ಆವರಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಒಣ ಕಸ ಹಸಿ ಕಸ ವಿಂಗಡನೆ ಬಗ್ಗೆ ಮಾಹಿತಿ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಮುರಳಿ ಕರುಂಬ ಮಯ್ಯ ವೈಯಕ್ತಿಕವಾಗಿ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿಯ ಸಿಬ್ಬಂದಿಗಳಿಗೆ ನಗದು ಬಹುಮಾನವನ್ನು ಕೂಡ ನೀಡಲಾಯಿತು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಬಿಂದುಶ್ರೀ,
ಜೆಡಿಎಸ್ ಮುಖಂಡ ಮಂಜೂರ್ ಅಲಿ,ಆಟೋಚಾಲಕರ ಸಂಘ ದ ಅಧ್ಯಕ್ಷರಾದ ರಜಾಕ್, ಕಾರ್ಯದರ್ಶಿ ಝಕರಿಯ,
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು,
ಕೋರೋನ ಟಾಸ್ಕ್ ಫೋರ್ಸ್  ಸಮಿತಿ ಸದಸ್ಯರು
ಪೊಲೀಸ್ ಇಲಾಖೆ ಸಿಬ್ಬಂದಿಗಳು ಆಟೋ ಚಾಲಕರ ಸಂಘದ ಸದಸ್ಯರು ಮತ್ತಿತರರು ಹಾಜರಿದ್ದರು.





No comments

Post a Comment