ರಾಜ್ಯ ಸುದ್ದಿ (Admin@Times Of Coorg) : ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ಮಾಡಿದ್ದಾರೆಂದು ದಾಖಲೆ ಸಮೇತ ಸತತವಾಗಿ ಪ್ರಸಾರ ಮಾಡಿದ್ದ ಕನ್ನಡ ಮಾಧ್ಯಮ ಪವರ್ ಟಿವಿ ಪ್ರಸಾರವನ್ನು ತಡೆಹಿಡಿಯುವ ಮೂಲಕ 250ರಷ್ಟು ಸಿಬ್ಬಂದಿಗಳು ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಪವರ್ ಟಿವಿ ಪ್ರಿನ್ಸಿಪಲ್ ಎಡಿಟರ್ ರೆಹಮಾನ್ ಹಾಸನ್ ಆರೋಪಿಸಿದ್ದಾರೆ.
ನೆನ್ನೆ ರಾತ್ರಿ ತಮ್ಮ ಫೇಸ್ಬುಕ್ ಖಾತೆಯ ಮೂಲಕ ಲೈವ್ ನಲ್ಲಿ ಮಾತನಾಡಿದ ರೆಹಮಾನ್ " ಸಿಸಿಬಿ ಪೋಲಿಸರು ಕೇಸಿಗೆ ಸಂಬಂಧಪಟ್ಟಂತೆ ಸರ್ಚ್ ವಾರಂಟ್ ಮೂಲಕ ಪವರ್ ಟಿವಿ ಕಚೇರಿ ಪರಿಶೀಲನೆ ನಡೆಸಿದ್ದಾರೆ. ಸಿಸ್ಟಂ, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ ಸಹಿತ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಯಾಕೆ ಎಂದು ತಿಳಿದಿಲ್ಲ. ಪವರ್ ಟಿವಿಯ ಫೇಸ್ಬುಕ್ ಖಾತೆಯ ನೇರಪ್ರಸಾರವನ್ನು ತಡೆಹಿಡಿಯಲಾಗಿದ್ದು, 250ರಷ್ಟು ಉದ್ಯೋಗಿಗಳು ಬೀದಿಗೆ ಬಂದಿದ್ದಾರೆ, ಯಡಿಯೂರಪ್ಪನವರು ಒಳ್ಳೆಯವರು, ಅವರ ಕುಟುಂಬದಿಂದ ಅವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಭಾವುಕರಾಗಿ ಮಾತನಾಡಿದರು. ಇದು ಮಾಧ್ಯಮ ಲೋಕಕ್ಕೆ ಕರಾಳ ದಿನ ಎಂದು ರೆಹಮಾನ್ ಹಾಸನ್ ಹೇಳಿದರು.
ಇನ್ನೂ ಪವರ್ ಟಿವಿಗೆ ಕರ್ನಾಟಕದಾದ್ಯಂತ ಭಾರಿ ಬೆಂಬಲ ದೊರೆಯುತ್ತಿದ್ದು, ಭ್ರಷ್ಟಾಚಾರ ಬಯಲಿಗಳೆದ ಕಾರಣ ತಮ್ಮ ಮಗನನ್ನು ರಕ್ಷಿಸಲು ಈ ರೀತಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

No comments
Post a Comment