ಕಡಂಗಮೂರೂರುವಿನಲ್ಲಿ ಕೋಲೆಯ ಸಮಾಜದ ಉದ್ಘಾಟನಾ ಸಮಾರಂಭ

No comments

ಕಡಂಗ (Times Of Coorg) : ಕೊಡಗಿನ ಮೂಲನಿವಾಸಿ ಜನಾಂಗಾಗಳಲ್ಲಿ ಒಂದಾದ ಕೋಲೆಯ ಜನಾಂಗದ  ಸಮಾಜದ ಉದ್ಘಾಟನೆಯು ಇದೆ ಸೆಪ್ಟೆಂಬರ್ ತಾರೀಕು 27 ರಂದು ವಿರಾಜಪೇಟೆ ತಾಲೋಕಿನ  ಕಡಂಗಮೂರೂರುವಿನ ದವಸ ಬಂಡಾರ ಸಭಾಭವನದಲ್ಲಿ  ನಡೆಯಿತು.ಕೈಪಂಗಡ ಭವಿಶ್ಯ  ರವರು ಪ್ರಾಥನೆಯನ್ನು ಮಾಡಿದರು. ಅಂಬಾಡಿರ ರಾಮಯ್ಯ ನವರು ಸಭೆಯನ್ನು ಸ್ವಾಗತಿಸಿದರು.  ನೂತನ ಸಮಾಜದ ಉದ್ಘಾಟನೆಯನ್ನು ದೀಪ ಬೆಳಗುವದರ ಮೂಲಕ ಹಿರಿಯರಾದ ಕೋಲೆಯಂಡ ಸೋಮಯ್ಯ ನವರು ಮಾಡಿದರು.  ಕೋಲೆಯ ಸಮಾಜದ ಅಧ್ಯಕ್ಷರಾಗಿ ಕೋಲೆಯಂಡ ಗಿರೀಶ್ ರವರು ಆಯ್ಕೆ ಯಾಗಿ ಅಧಿಕಾರ ವಹಿಸಿಕೊಂಡರು.ಉಪಾಧ್ಯಕ್ಷರಾಗಿ ಅಂಬಾಡಿರ ಕಾರ್ಯಪ್ಪನವರು, ಕಾರ್ಯದರ್ಶಿಯಾಗಿ ಅಂಬಾಡಿರ ರಾಮಯ್ಯನವರು,  ಖಜಾಂಜಿ ಯಾಗಿ ಕೈಪಂಗಡ ವಿಠಲ ಉತಪ್ಪ ,ನವರು ಆಯ್ಕೆ ಯಾದರು.   ಸಭೆಯಲ್ಲಿ ಹಿರಿಯರಾದ ಕೈಪಂಗಡ ಪೂವಮ್ಮ ನವರು, ಹಿರಿಯರಾದ ಅಂಬಾಡಿರ ಗಣಪತಿಯವರು ಉಪಸ್ಥಿತರಿದ್ದರು. ಹಿರಿಯರಾದ  ಕೋಲೆಯಂಡ Dr. ಮೋಹನ್ ಅಪ್ಪಾಜಿಯವರು ಮಾತನಾಡಿ, ಸಮಾಜ ಅಭಿವೃದ್ಧಿ ಗೆ ನೂತನ ಆಡಳಿತ ಮಂಡಳಿ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕೆಂಬ ಸಲಹೆ ನೀಡಿದರು.  ಸಭಾಧ್ಯಕ್ಷತೆ ವಹಿಸಿ ಕೋಲೆಯಂಡ ಸೋಮಯ್ಯ ನವರು ಅಧ್ಯಕ್ಷರ ಭಾಷಣ ಮಾಡಿದರು.  ಅಂಬಾಡಿರ ಕಾರ್ಯಪ್ಪನವರು ವಂದನಾರ್ಪಣೆಯನ್ನು ಮಾಡಿದರು. ಸಭೆಯಲ್ಲಿ ಕೊಡಗಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ  ಎಲ್ಲ ಕೋಲೆಯ ಜನಾಂಗದ ಬಾಂದವರು ಭಾಗವಹಿಸಿದ್ದರು.

No comments

Post a Comment