ವಿರಾಜಪೇಟೆ ಅಕ್ರಮ ಗಾಂಜಾ ಸಾಗಾಟ : ಆರೋಪಿ ಬಂಧನ - ಓರ್ವ ಪರಾರಿ
ವಿರಾಜಪೇಟೆ (Times Of Coorg) : ದಿನಾಂಕ 23-9-2020 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದಲ್ಲಿ ಗೋಣಿಕೊಪ್ಪ ಕಡೆಯಿಂದ ಬಿಟ್ಟಂಗಾಲ ಮಾರ್ಗವಾಗಿ ವಿರಾಜಪೇಟೆ ಕಡೆಗೆ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ವಿರಾಜಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ನೇತೃತ್ವದ ತಂಡ ಆರೋಪಿ ಕಿರಗೂರು ಗ್ರಾಮದ ಪೆಮ್ಮಂಡ ಯು. ಸೋಮಣ್ಣ @ ಸುಹಾಸ್ ಎಂಬವರನ್ನು ವಶಕ್ಕೆ ಪಡೆದು ಆತನಿಂದ 45 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್ ಹಾಗು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಂಡಿರುತ್ತಾರೆ. ದಾಳಿ ಸಂದರ್ಭದಲ್ಲಿ ಮತ್ತೊಬ್ಬ ಆರೋಪಿ ಬಾಳುಗೋಡು ಗ್ರಾಮದ ಚೇಂದಂಡ ಬೋಪಣ್ಣ ಪರಾರಿಯಾಗಿರುತ್ತಾನೆ.
ಈ ಕಾರ್ಯಾಚರಣೆಯು ವಿರಾಜಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ಶ್ರೀ ಸಿ.ಟಿ. ಜಯಕುಮಾರ್ ರವರ ನೇತೃತ್ವದಲ್ಲಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ವೀಣಾನಾಯಕ್, ಗೋಣಿಕೊಪ್ಪ ಠಾಣೆಯ ಎಎಸ್ಐ ಸುಬ್ರಮಣಿ ಸಿಬ್ಬಂದಿಗಳಾದ ವಿರಾಜಪೇಟೆ ಗ್ರಾಮಾಂತರ ಠಾಣೆಯ ರಾಮಪ್ಪ ಮತ್ತು ಚಂದ್ರಶೇಖರ ಹಾಗು ಪೊನ್ನಂಪೇಟೆ ಠಾಣೆಯ ಎಂ.ಡಿ.ಮನು ರವರು ಭಾಗವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪ್ರಶಂಸಿಸಲಾಗಿದೆ.

No comments
Post a Comment