ಡಾ.ಬಿ.ಆರ್ ಅಂಬೇಡ್ಕರ್ ನಿವಾಸದ ಮೇಲೆ ಧಾಳಿ ಖಂಡನೀಯ : ಕಾಂಗ್ರೆಸ್

No comments

ಮಡಿಕೇರಿ (Times Of Coorg) :ಸಂವಿಧಾನ ಶಿಲ್ಪಿ ,ಭಾರತ ರತ್ನ ಡಾ.ಬಿ.ಆರ್  ರವರ ಮುಂಬೈನ ದಾದ್ರದಲ್ಲಿರುವ ನಿವಾಸ ರಾಜಗೃಹದಲ್ಲಿ ಜುಲೈ 7 ರಂದು ದುಷ್ಕರ್ಮಿಗಳು ದಾಳಿ ಮಾಡಿದ್ದು ಇದು ಅತ್ಯಂತ ಹೇಯ ಕೃತ್ಯ ಎಂದು ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷರು ಮತ್ತು ಕೊಡಗು ಜಿಲ್ಲಾ ಕಾಂಗ್ರೆಸ್ ಖಜಾಂಚಿಗಳಾದ ಹೆಚ್ ಎಂ ನಂದಕುಮಾರ್ ಖಂಡಿಸಿದ್ದಾರೆ.ಈ‌ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡರು,
ಸ್ವಾತಂತ್ರ್ಯ ,ಸಮಾನತೆ ,ಸಹೋದರತೆಯ ಭಾವನೆಗಳನ್ನು ಭಾರತೀಯರಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನವನ್ನು ಅಪಮಾನಿಸುವ ಮನಸ್ಥಿತಿಯನ್ನು ಹೊಂದಿರುವ ಮನುವಾದಿಗಳು ಸಮಾಜದಲ್ಲಿ ಇದ್ದಾರೆ ಎನ್ನುವುದು ಆತಂಕಕಾರಿ ವಿಷಯವಾಗಿದೆ.

ಈ ಘಟನೆ ಹಿಂದೆ ಆರ್..ಎಸ್.ಎಸ್ ಮತ್ತು ಬಿಜೆಪಿ ಸಂಘ ಪರಿವಾರದ ಕೈವಾಡ ಗೋಚರಿಸುತ್ತಿದೆ. ನೂರಾ ಮೂವತ್ತು ಕೋಟಿ ಭಾರತೀಯರು ಗೌರವಿಸುವ ,ಅನುಸರಿಸುವ ಭಾರತದ ಸಂವಿಧಾನದ  ಶಿಲ್ಪಿ ,ಡಾ. ಅಂಬೇಡ್ಕರ್ ರವರಿಗೆ ಅಪಮಾನಿಸುವವರನ್ನು ದೇಶ ದ್ರೋಹಿಗಳೆಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಬೇಕೆಂದು ನಂದ ಕುಮಾರ್ ಒತ್ತಾಯಿಸಿದ್ದಾರೆ. ಭವ್ಯ ಭಾರತದ ನಿರ್ಮಾತೃ ಡಾ ಅಂಬೇಡ್ಕರ್ ರವರ ನಿವಾಸದ ಮೇಲೆ ಧಾಳಿ ಅಕ್ಷಮೀಯ ಅಪರಾಧವಾಗಿದ್ದು ಇದನ್ನು ಕೊಡಗು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಖಂಡಿಸುತ್ತದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನೀರಾ ಮೈನಾ ಅಭಿಪ್ರಾಯಪಟ್ಟಿದ್ದಾರೆ.

,ಶಿಕ್ಷಣ ,ಸಂಘಟನೆ, ಹೋರಾಟ ಎಂಬ ಮೂರು ಬೀಜ ಮಂತ್ರಗಳನ್ನು ಭಾರತೀಯರಿಗೆ ನೀಡಿ ಭಾರತವನ್ನು ಆರ್ಥಿಕವಾಗಿ ,ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ಉನ್ನತ್ತ  ಸ್ಥಾನಕ್ಕೆ ಏರಿಸಿದ ಬಾಬಾ ಸಾಹೇಬ್ ರವರ ಅಪಮಾನವನ್ನು ಭಾರತೀಯರು ಸಹಿಸುವುದಿಲ್ಲ ಎಂದು ತೆನ್ನೀರಾ  ಮೈನಾ ಎಚ್ಚರಿಸಿದ್ದಾರೆ.

ಅಂಬೇಡ್ಕರ್ ನಿವಾಸದ ಮೇಲಿನ ಧಾಳಿಯನ್ನು ಕಾಂಗ್ರೆಸ್ ಮುಖಂಡರಾದ ಪುಲಿಯಂಡ ಜಗದೀಶ್ ,ನಗರ ಸಭೆ ಮಾಜಿ ಸದಸ್ಯರಾದ ಪ್ರಕಾಶ್ ಆಚಾರ್ಯ ,ಕೆ. ಎಂ ವೆಂಕಟೇಶ್ ,ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭುರೈ,ಹಿರಿಯ ಮುಖಂಡರಾದ ಟಿ. ಪಿ ರಾಜೇಂದ್ರ ,ಎಂ ಇ ಹನೀಫ್,ಐಲಪಂಡ  ಪುಷ್ಪ ಪೂಣಚ್ಚ ,ಪ್ರಮುಖರಾದ ರವಿಗೌಡ ,ಹಫೀಸ್ ಬಾಯ್ ,ಮುನೀರ್ ಮಾಚರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ.

No comments

Post a Comment