ಪೊನ್ನಂಪೇಟೆ (Times Of Coorg) : ವ್ಯವಸಾಯಗಾರರಾಗಿದ್ದ ವೀರಾಜಪೇಟೆ ಸಮೀಪದ ಗುಂಡಿಗೆರೆ ಬೇಟೋಳಿ ನಿವಾಸಿ ಎಂ.ಎಂ. ಮೂಸ ಅವರ ನಿಗೂಢ ಸಾವಿನ ಕುರಿತು ಪೆÇಲೀಸರು ಯಾವುದೇ ಶಕ್ತಿಗಳ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆಳಯಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿ.ಸಿ.ಸಿ.) ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಅಲ್ಲದೆ ಕಾಣೆಯಾಗಿದ್ದ ಮೂಸ ಅವರನ್ನು ಹುಡುಕುವ ಸಂದರ್ಭದಲ್ಲಿ ಏ.10ರಂದು ವೀರಾಜಪೇಟೆ ಸಮೀಪದ ಬಾಳುಗೋಡಿನಲ್ಲಿ ನಡೆದ ಹಲ್ಲೆ ಪ್ರಕರಣದ ಸತ್ಯಾಂಶ ಏನು ಎಂಬುದು ಪೆÇಲೀಸ್ ಇಲಾಖೆಗೆ ಚೆನ್ನಾಗಿ ತಿಳಿದಿದೆ. ಅದ್ದರಿಂದ ಪೆÇಲೀಸರು ಸತ್ಯದ ಕಡೆ ನಿಂತು ನ್ಯಾಯ ಒದಗಿಸಿಕೊಡಬೇಕು ಎಂದು ಕೆ.ಕೆ. ಮಂಜುನಾಥ್‍ಕುಮಾರ್ ಹಾಗೂ ವಕ್ತಾರ ಟಾಟು ಮೊಣ್ಣಪ್ಪ ಒತ್ತಾಯಿಸಿದ್ದಾರೆ.
No comments
Post a Comment