ಕೊರೋನ ಮಹಾ ಮಾರಿಯ ಬಗ್ಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಿದ ಮಡಿಕೇರಿಯ ವಿದ್ಯಾರ್ಥಿ

ಮಡಿಕೇರಿ (Times Of Coorg) : ಕೊರೋನಾ ವೈರಸ್ ಮಾದರಿಯ ತಲೆ ಕವಚ ಹಾಗೂ ಸಾರ್ವಜನಿಕರು ಪಾಲಿಸಬೇಕಾದ ಅಗತ್ಯ ಕ್ರಮಗಳ ಮಾಹಿತಿಯನ್ನು ಒಳಗೊಂಡ ಫ್ಲಕ್ಸ್ ಧರಿಸಿ ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿ ಜಾಗೃತಿ ಮೂಡಿಸಿದರು. ಜಾಗೃತಿ ಕಾರ್ಯವನ್ನು ಮಡಿಕೇರಿ ಡಿ.ವೈ.ಎಸ್.ಪಿ ದಿನೇಶ್ ಕುಮಾರ್ ಉದ್ಘಾಟಿಸಿದರು.

ಮಡಿಕೇರಿಯ ಕೇಂದ್ರೀಯ ವಿದ್ಯಾಲಯದ 9 ನೆ ತರಗತಿಯ ವಿದ್ಯಾರ್ಥಿಯ ಸಮಾಜ ಮುಖಿ ಸೇವೆಗೆ ಮಡಿಕೇರಿ ಯೂತ್ ಕಮಿಟಿಯ ಅಧ್ಯಕ್ಷ ಜೈನುಲ್ ಆಬಿದ್, ಪದಾಧಿಕಾರಿಗಳಾದ ಮುಝಮ್ಮಿಲ್, ಶಾಹಿನ್ಶಾ ಹಾಗೂ ಸದಸ್ಯರು ಸಾಥ್ ನೀಡಿದರು.

ಮಡಿಕೇರಿ ಆಝಾದ್ ನಗರದ ಕಲೀಲ್ ಕ್ರಿಯೇಟಿವ್ ಮತ್ತು ಆಯಿಶಾ ದಂಪತಿಗಳ ಪುತ್ರ ಶಾಹಿದ್ ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.