ಸೋಮವಾರಪೇಟೆಯಲ್ಲಿ ಲಾಕ್ಡೌನ್ ಮಧ್ಯೆಯೂ ಜನಜಾತ್ರೆ

No comments

ಸೋಮವಾರಪೇಟೆ ( Times Of Coorg):- ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗಾಗಿ ನೀಡಿದ ಸಮಯವಕಾದಲ್ಲಿ ಅಗತ್ಯ ವಸ್ತುಗಳಿಗಾಗಿ ಜನರು ಮುಗಿ ಬಿದ್ದ ಘಟನೆ ಸೋಮವಾರ ಪೇಟೆಯಲ್ಲಿ  ಜರುಗಿತು.  ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಜಮಾಯಿಸಿದ್ದ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಲ್ಲಿ ನಿರುತ್ಸಾಹ ತೋರಿದರು. ತಾಲೂಕು ಆಡಳಿತದ ಎಚ್ಚರಿಕೆಯ ನಡುವೆಯೂ ತರಕಾರಿಯನ್ನು ದುಪ್ಪಟ್ಟು ಬೆಲೆಗೆ ಅಮ್ಮಾ ರುವುದು ಕಂಡುಬಂದಿದೆ. ಜನಜಂಗುಳಿಯನ್ನು ನಿಯಂತ್ರಿಸಲು ಹಾಗೂ ರಸ್ತೆಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಲಾಕ್ಡೌನ್ ಹಿನ್ನೆಲೆಯಲ್ಲಿ ಜನಜಂಗುಳಿಯನ್ನು ಕಡಿಮೆ ಮಾಡಲು ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಊಹೆಗೂ ಮೀರಿ ದಂತೆ ಅಗತ್ಯವಸ್ತುಗಳ ಇದಕ್ಕೆ ಜನಸಾಗರವೇ ಹರಿದುಬಂದಿತ್ತು. ಇದರಿಂದ ಪೊಲೀಸರಿಗೆ ಜನ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

No comments

Post a Comment