ವಿರಾಜಪೇಟೆ ಠಾಣಾ ವ್ಯಾಪ್ತಿ ಯಲ್ಲಿ ಬೀಕರ ಅಪಘಾತ ಗಳು ಇಬ್ಬರು ಸ್ಥಳದಲ್ಲೇ ಸಾವು


ವಿರಾಜಪೇಟೆ (TOC ನ್ಯೂಸ್) : ಗಣೇಶ ಉತ್ಸವ ವಿಸರ್ಜನೆ ಗೆ ತೆರಳುತಿದ್ದ ವಾಹನ ಸವಾರ ರಸ್ತೆ ಅಪಘಾತದಲ್ಲಿ ಮರಣ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ಗಣೇಶ ಉತ್ಸವ ಮೂರ್ತಿ ವಿಸರ್ಜನೆ ಗೆ ತಮ್ಮ ಪಲ್ಸರ್ ಬೈಕ್ ನಲ್ಲಿ ಮಲ್ಲಂಬಟ್ಟಿಯಿಂದ ಅಮ್ಮತ್ತಿಗೆ ತೆರಳುತಿದ್ದ ಕವನ ೨೦ ಮತ್ತು ಮಂಜು ಯವಕರು ಚೆಂಬೆಬೇಳ್ಳೂರು ಒಂಟಿಅಂಗಡಿ ಮದ್ಯೆ ಎದುರು ನಿಂದ ಬಂದ ಡಸ್ಟರ್ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ ಪರಿಣಾಮ ಬೈಕ್ ಸವಾರ ಹೆಚ್,ಎಸ್ ಕವನ ೨೦ ಸ್ಥಳದಲ್ಲೇ ಅಸುನೀಗಿದ್ದಾನೆ ಹಿಂಬದಿ ಸಾವರನಿಗೆ ಸಣ್ಣಪುಟ್ಟ ಗಾಯಗಳಾಗಿವೆ .ಮೃತನು ವಿರಾಜಪೇಟೆ ತಾಲ್ಲೂಕಿನ ಮೈತಾಡಿ ಗ್ರಾಮದ ದಿ.ಶಿವಪ್ಪ ಅವರ ಪುತ್ರ ಎಂದು ಗುರುತಿಸಲಾಗಿದೆ ಹಿಂಬದಿ ಸವಾರ ಮಂಜು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ .


ಮದುವೆಗೆ ಬಂದ ವ್ಯಕ್ತಿ ಮರಣಕ್ಕೆ ವಿರಾಜಪೇಟೆ ಯ ಅರ್ ಕೆ.ಎಫ್ ಮುಂಬಾಗ ಅಪಘಾತ 


ರಸ್ತೆ ದಾಟುತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ರಾತ್ರಿ ೧೦.೩೦ ಕ್ಕೆ ದುರ್ಘಟನೆ .ಅಪರಿಚಿತ ವಾಹನದಿಂದ ಪಾದಚರಿಗೆ ಡಿಕ್ಕಿ ಪಡಿಸಿ ಪರಾರಿಯಾಗಿದ್ದಾರೆ. ಮುರುವಂಡ ಸಿ.ಪೊನ್ನಪ್ಪ ೫೬ ಮೃತರು. ಮಾಜಿ ಸೈನಿಕ ಬಿಟ್ಟಂಗಾಲ ಕೊಳ್ತೊಡು ಗ್ರಾಮದ ನಿವಾಸಿ ಮ್ರತರ ಮಗ ಮೋನಿಶ್ ಸೋಮಯ್ಯ ಅವರಿಂದ ದೂರು ದಾಖಲು ವಿರಾಜಪೇಟೆ ಗ್ರಾಮಾಂತರ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲು ತನಿಖೆ ಮುಂದುವರಿದಿದೆ.