SSF ಸೋಮವಾರಪೇಟೆ ಡಿವಿಷನ್ ವತಿಯಿಂದ ಧ್ವಜ ದಿನದ ಅಂಗವಾಗಿ ROUTE OF ROOT ಕಾರ್ಯಕ್ರಮ

No comments

ಸೋಮವಾರಪೇಟೆ (web@timesofcoorg)  : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು 33 ವರ್ಷಗಳು ಸಂದಿವೆ, ಧ್ವಜ ದಿನವನ್ನು (ಸೆಪ್ಟೆಂಬರ್ 19) ಎಲ್ಲಾ ವರ್ಷವೂ ಆಚರಿಸುತ್ತಿದೆ. ಈ ಪ್ರಯುಕ್ತ ಎಸ್ಸೆಸ್ಸೆಫ್ ಸೋಮವಾರಪೇಟೆ ಡಿವಿಷನ್ ವತಿಯಿಂದ ಬೇರಿನ ದಾರಿ (ROUTE OF ROOT) ಕಾರ್ಯಕ್ರಮ ಸುಂಟಿಕೊಪ್ಪದ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.




ರಾಜ್ಯ ಸಮಿತಿಯ ನಿರ್ದೇಶನದಂತೆ ಈ ಬಾರಿಯ ಧ್ವಜ ದಿನದ ಪ್ರಯುಕ್ತ ರಾಜ್ಯದ ಎಲ್ಲಾ ಡಿವಿಷನ್ ಗಳಲ್ಲಿ ಮಾಜಿ ನಾಯಕರ ಸಮಾಗಮನ್ನು ಏರ್ಪಡಿಸಲಾಗಿದೆ.

ಎಸ್ಸೆಸ್ಸೆಫ್ ಸೋಮವಾರಪೇಟೆ ಡಿವಿಷನ್ ಕಾರ್ಯಕ್ರಮದಲ್ಲಿ ಮಾಜಿ ನಾಯಕರುಗಳಾದ ಉಮರ್ ಸಖಾಫಿ ಎಡಪ್ಪಲಂ, ಮುಹಮ್ಮದ್ ಅಲಿ ಸಖಾಫಿ ಕಲ್ಕಂದೂರು, ರಝಾಕ್ ಸಅದಿ, ಸುಲೈಮಾನ್ ಸಖಾಫಿ ಗರಗಂದೂರು, ಖಾದರ್ ಕರ್ಕಳ್ಳಿ, ಝಕರೀಯ ಗರಗಂದೂರು, ಸಿದ್ದೀಕ್ ಹೊಸತೋಟ , ರಝಾಕ್ ಗದ್ದೇಹಳ್ಳ, ಅಲಿ ಸುಂಟಿಕೊಪ್ಪ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಇವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.


 ಡಿವಿಷನ್ ಅಧ್ಯಕ್ಷರಾದ ಖಮರುದ್ದೀನ್ ಅನ್ವಾರಿ ಅಸ್ಸಖಾಫಿ ಅಧ್ಯಕ್ಷತೆ ವಹಿಸಿದರೆ ಜಿಲ್ಲಾ ನಾಯಕರಾದ ರಫೀಖ್ ಲತೀಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಕರ್ಕಳ್ಳಿ ವಂದಿಸಿದರು. ಎಸ್ಸೆಸ್ಸೆಫ್ ಡಿವಿಷನ್ ಪದಾಧಿಕಾರಿಗಳು & ಕಾರ್ಯಕರ್ತರು ಭಾಗವಿಹಿಸಿದ್ದರು.

ಡಿವಿಷನ್ ಕಾರ್ಯದರ್ಶಿ ಶಾಫಿ ಅನ್ವಾರಿ ಅಸ್ಸಖಾಫಿ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಕರ್ಕಳ್ಳಿ ವಂದಿಸಿದರು.

No comments

Post a Comment