ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (web@timesofcoorg) :ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.ಕೆಲವು ದಿನಗಳಿಂದ ನಾಪೋಕ್ಲು ಪಟ್ಟಣದಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿದ್ದು ಬೆಳಿಗ್ಗಿನ ಜಾವಾ ಪತ್ರಿಕೆ ಮತ್ತು ಹಾಲು ಖರೀದಿಸಲು ಬರುವ ಮಕ್ಕಳು ಹಾಗೂ ಸಾರ್ವಜನಿಕರನ್ನು ಹಟ್ಟಿಸಿಕೊಂಡು ಬರುತ್ತಿದ್ದು ಇದರಿಂದ ಜನರು ಪಟ್ಟಣದಲ್ಲಿ ನಡೆದಾಡಲು ಹೆದರುತ್ತಿದ್ದಾರೆ.ಆದ್ದರಿಂದ ಸಂಬಂಧಪಟ್ಟ ಗ್ರಾಮಪಂಚಾಯಿತಿಯವರು ಕೂಡಲೇ ನಾಯಿಗಳ ನಿಗ್ರಹಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




No comments
Post a Comment