ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಅಧಿಕೃತ APP ಬಿಡುಗಡೆ : ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯ

No comments

ದೇರಳಕಟ್ಟೆ (Times Of Coorg@ದ.ಕ): ಸೆಪ್ಟೆಂಬರ್ 18 ಶುಕ್ರವಾರ ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಯ ಆಪ್ ಬಿಡುಗಡೆ ಕಾರ್ಯವು ಬ್ಲಡ್ ಡೋನರ್ಸ್ ಮಂಗಳೂರು ದೇರಳಕಟ್ಟೆ ಕಚೇರಿಯಲ್ಲಿ ದಿನಾಂಕ 18/9/2020 ರಂದು ಸಂಜೆ 6 ಗಂಟೆಗೆ ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಕಾರ್ಯದರ್ಶಿ ನವಾಝ್ ಕಲ್ಲರಕೋಡಿ ಇವರಿಂದ ಕಾರ್ಯನಿರ್ವಾಹಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಈ ಆಪ್ ನಲ್ಲಿ ತುರ್ತು ರಕ್ತದಾನ ಹಾಗೂ ರಕ್ತದಾನ ಬೇಡಿಕೆ, ಬಿಡಿಎಂ  ಸಾಮಾಜಿಕ ಜಾಲಾತಾಣಗಳ ಪೂರ್ಣ ಮಾಹಿತಿಗಳನ್ನು ಒಳಗೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದೀಕ್ ಮಂಜೇಶ್ವರ ವಹಿಸಿ ಮಾತನಾಡುತ್ತಾ ಆಪ್ ಬಗ್ಗೆ ಇರುವ ಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದರು.

ಆಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕರಾದ ಫಯಾಝ್ ಮಾಡುರು, ಹಕೀಮ್ ಕೆ.ಸಿ.ರೋಡ್,ಮುನೀರ್ ಚೆಂಬುಗುಡ್ಡೆ, ಫಾರೂಕ್ ಬಿಗ್ ಗ್ಯಾರೇಜ್, ಶಮೀರ್ ಕಡವಿನ ಬಾಗಿಲು, ಅಶ್ರಫ್ ಉಪ್ಪಿನಂಗಡಿ, ನಿಝಾಾಮುದ್ದೀನ್ ಉಪ್ಪಿನಂಗಡಿ ತಬೂಕ್, ಹಮೀದ್ ಪಜೀರ್, ತಾಜ್ ಮಂಜನಾಡಿ, ಮನ್ಸೂರ್ ಕೋಡಿಜಾಲ್ ಮೊದಲಾದವರು ಉಪಸ್ಥಿತರಿದ್ದರು.

ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಯ ಕಾರ್ಯನಿರ್ವಾಹಕ ರಝಾಕ್ ಸಾಲ್ಮಾರ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.

APP LINK :
https://play.google.com/store/apps/details?id=blood.donorsmangaluru
 ವರದಿ: ಬಿ.ಡಿ.ಎಂ


No comments

Post a Comment