ಮಾರ್ಚ್ 31 ರವರೆಗೆ ಅಂತರ್ ಜಿಲ್ಲಾ ಸಂಪರ್ಕ ಸಂಪೂರ್ಣ ನಿಷೇಧ ; ಅನ್ನಿಸ್ ಕಣ್ಮಣಿ ಜಾಯ್

No comments
       ಮಡಿಕೇರಿ TOC:- ರಾಜ್ಯದಲ್ಲಿ  ಕೋವಿಡ್-19 ವೈರಾಣುವನ್ನು ನಿಗ್ರಹ ಮಾಡುವ ದೃಷ್ಟಿಯಿಂದ ಸರ್ಕಾರವು ಹಲವು ತುರ್ತು ನಿರ್ಧಾರವನ್ನು ಕೈಗೊಂಡಿದ್ದು, ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲೆ ಸೇರಿದಂತೆ 9 ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳು ಕಂಡು ಬಂದಿರುವುದರಿಂದ ಜಿಲ್ಲಾಡಳಿತ ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತುರ್ತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಾರ್ಚ್ 22 ರಾತ್ರಿ 9 ಗಂಟೆಗೆ ಜನತಾ ಕಫ್ರ್ಯೂ ಮುಗಿಯಲಿದ್ದು,  ರಾತ್ರಿ 9 ಗಂಟೆಯಿಂದ ಮಧ್ಯ ರಾತ್ರಿ 12 ಗಂಟೆಯವರೆಗೆ ಸೆಕ್ಸನ್ 144 ನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯ ಕೂಡಿಗೆ ಕೈಗಾರಕಾ ಪ್ರದೇಶದಲ್ಲಿನ ಕೈಗಾರಿಕಾ ಘಟಕದಲ್ಲಿ ದಿನ ಬಿಟ್ಟು ದಿನ 50 ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವುದು ಹಾಗೂ ಯಾವುದೇ ವೇತನವನ್ನು ಕಡಿತಗೊಳಿಸಬಾರದು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಅಂತರ್ ರಾಜ್ಯ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದರೊಂದಿಗೆ ಅಂತರ್ ಜಿಲ್ಲಾ ಸಾರಿಗೆ ವ್ಯವಸ್ಥೆಯನ್ನು ಮಾರ್ಚ್ 31 ರವರೆಗೆ ಸ್ಥಗಿತಗೊಳಿಸಲಾಗಿದ್ದು, ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಸೇವೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ಅಗತ್ಯ ವಸ್ತುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪಿಯುಸಿ ಪರೀಕ್ಷೆ ಮುಂದೂಡಿರುವುದರಿಂದ ಹೊರ ಜಿಲ್ಲೆಗಳಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಮ್ಮ ಮನೆಗೆ ಹಿಂತಿರುಗಲು ಯಾವುದೇ ಆತಂಕ ಪಡುವಂತಿಲ್ಲ. ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿಯನ್ನು ಚೆಕ್ ಪೋಸ್ಟ್‍ಗಳಲ್ಲಿ ತೋರಿಸಿ ಜಿಲ್ಲೆಯನ್ನು ಪ್ರವೇಶಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಶಾಲಾ ಮತ್ತು ಕಾಲೇಜು ಶಿಕ್ಷಕರಿಗೆ ಸರ್ಕಾರವು ರಜೆ ಘೋಷಿಸಿದ್ದು, ಆದರೆ ತುರ್ತು ಸೇವೆಗಳಿಗೆ ಅವಶ್ಯವಿದ್ದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಬೇಕಾಗಿರುವುದೆರಿಂದ ಶಿಕ್ಷಕರು ಕೇಂದ್ರ ಸ್ಥಾನದಲ್ಲಿರಬೇಕು. ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಸಾಮಾಗ್ರಿಗಳನ್ನು ಒಟ್ಟಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
ದಿನಸಿ, ತರಕಾರಿ, ಹಾಲು, ಹಣ್ಣು ಔಷಧಿ, ಇಂದಿರಾ ಕ್ಯಾಂಟಿನ್, ಹಾಪ್‍ಕಾಮ್ಸ್ ಮಳಿಗೆ, ಕೃಷಿ ಸಾಮಾಗ್ರಿ ಮಳಿಗೆಗಳು ಇತರೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ  ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ಮಾರ್ಚ್ 31ರ ವರೆಗೆ ನಿರ್ಬಂಧಿಸಲಾಗಿದೆ. ಸಾಧ್ಯವಾದಷ್ಟು ಕುಟುಂಬದ ಒಬ್ಬ ಸದಸ್ಯ ಮಾತ್ರ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು ಎಂದು ಅವರು ತಿಳಿಸಿದರು.
    ಜಿಲ್ಲೆಯಲ್ಲಿ ಇದುವರೆಗೂ ಒಂದು ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು 247 ಜನರು ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಜಿಲ್ಲೆಗೆ ಬಂದಿದ್ದು, ಇವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು (ಊome ಕಿuಚಿಡಿಚಿಟಿಣiಟಿe) ಮಾಡಲಾಗಿದೆ.           
     ಒಟ್ಟು 8 ವ್ಯಕ್ತಗಳಿಗೆ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದ್ದ ಪ್ರಕರಣಗಳ ಪೈಕಿ 04 ಪ್ರಕರಣದಲ್ಲಿ ಪ್ರಯೋಗಾಲಯ ವರದಿಯಿಂದ ಸೋಂಕು ಇಲ್ಲದಿರುವುದು ದೃಢಪಟ್ಟಿರುತ್ತದೆ. ಅವರನ್ನು ಆಸ್ಪತ್ರಯಿಂದ ಬಿಡುಗಡೆಗೊಳಿಸಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು (ಊome ಕಿuಚಿಡಿಚಿಟಿಣiಟಿe) ಮಾಡಲಾಗಿದೆ. ಉಳಿದ 04 ಈ ಪ್ರಕರಣಗಳಲ್ಲಿ ಪ್ರಯೋಗಾಲಯ ವರದಿ ನಿರೀಕ್ಷಿಸಲಾಗಿದೆ. 
    ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ದೃಢಪಟ್ಟ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬಂದ 70 ಜನರನ್ನು ಪರೀಕ್ಷಿಸಿದ್ದು, ಸೊಂಕು ಲಕ್ಷಣಗಳು ಕಂಡುಬರದ ಹಿನ್ನಲೆಯಲ್ಲಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು (ಊome ಕಿuಚಿಡಿಚಿಟಿಣiಟಿe) ಮಾಡಲಾಗಿದೆ. ಸೊಂಕು ದೃಢಪಟ್ಟವರ ಜೊತೆ ವಿಮಾನ ಹಾಗೂ ಬಸ್ಸಿನಲ್ಲಿ ಪ್ರಯಾಣಿಸಿದವರನ್ನು ಗುರುತಿಸಿ ಅಗತ್ಯ ಜಿಕಿತ್ಸೆ ನೀಡಲು ಅರೋಗ್ಯ ಇಲಾಖೆಯ ರಾಜ್ಯ ಸರ್ವೇಕ್ಷಣಾ ಘಟಕ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
      ಕೋವಿಡ್-19 ರ ಸಂಬಂಧ ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಹಿಂತಿರುಗಿ ಬಂದಿರುವವರನ್ನು ಪತ್ತೆ ಹಚ್ಟಿ ತಪಾಸಣೆ ಮಾಡಿ ಅವರ ಕೈಗಳಿಗೆ ಮುದ್ರೆ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಹಾಗೂ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು (ಊome ಕಿuಚಿಡಿಚಿಟಿಣiಟಿe) ಮಾಡಲಾಗಿದೆ. ಹಾಗೂ ಅವರು ಮನೆ ಬಿಟ್ಟು ಹೊರಗೆ ಬರದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
     ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿಯನ್ನು ಈಗಾಗಲೇ ರಚನೆ ಮಾಡಿದ್ದು, ಈ ಸಂಬಂಧ ನೋಡಲ್ ಅಧಿಕಾರಿಗಳ ನೇಮಕ ಹಾಗೂ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆಗಳಲ್ಲಿಯೇ ಸಂಪರ್ಕ ತಡೆಯನ್ನು (ಊome ಕಿuಚಿಡಿಚಿಟಿಣiಟಿe) ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೆಕರ್ ಅವರು ಮಾತನಾಡಿ ಈಗಾಗಲೇ ಮಾರ್ಚ್ 31ರ ವರೆಗೆ ಅಂತರ್ ರಾಜ್ಯ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅದರಂತೆಯೇ ಅಂತರ್ ಜಿಲ್ಲಾ ಸಂಚಾರವನ್ನು ಇಂದಿನಿಂದ ನಿಷೇಧಿಸಿ ಕೊಪ್ಪ, ಸಂಪಾಜೆ, ಶ್ರಿರಂಗಾಲ ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ ಇದ್ದರು.

No comments

Post a Comment