ನಾಳೆಯಿಂದ ಅಕ್ಟೋಬರ್ ೧೫ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ...

No comments

ಬೆಂಗಳೂರು: ನಾಳೆಯಿಂದ ಆಕ್ಟೋಬರ್ 15ರ ವರಗೆ ರಾಜ್ಯದಲ್ಲಿನ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ನಿಮ್ಮ ಹೆಸರು ಸೇರ್ಪಡೆ ಮಾಡುವುದಿದ್ದರೇ, ಹೆಸರು ತಿದ್ದುಪಡಿ ಮಾಡುವುದಿದ್ದರೇ ಮಾಡಲು ಮುಕ್ತ ಅವಕಾಶವನ್ನು ರಾಜ್ಯ ಚುನಾವಣಾ ಆಯೋಗ ನೀಡಿದೆ.* ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, #ಸೆಪ್ಟಂಬರ್_1ರಿಂದ_ಅಕ್ಟೋಬರ್_15ರ ವರಗೆ ಎರಡೂ ವರೆ ತಿಂಗಳ ಕಾಲ ರಾಜ್ಯದ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುತ್ತಿದೆ. ಹೊಸದಾಗಿ ಹೆಸರನ್ನು ಸೇರಿಸುವವರು, ಮತದಾರರ ಪಟ್ಟಿಯಲ್ಲಿನ ತಪ್ಪು ಸರಿಪಡಿಸುವುದು ಇದ್ದರೇ ಸೇರಿಸಿ, ಸರಿಪಡಿಸಲು ಮುಕ್ತವಾಗಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. 18 ವರ್ಷ ತುಂಬಿರುವ ರಾಜ್ಯದ ಎಲ್ಲರೂ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಬಹುದು. 2020ರ ಜನವರಿ 1ಕ್ಕೆ 18 ವರ್ಷ ತುಂಬುತ್ತಿರುವವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅವಕಾಶ ಮಾಡಿಕೊಡಲಾಗಿದೆ. ಇಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳುವಂತೆ ಹೇಳಿದರು. ರಾಜ್ಯದಲ್ಲಿ ಈ ವರೆಗೆ 5,10,60,498 ಮತದಾರರಿದ್ದಾರೆ. 18 ವರ್ಷದ ಮತದಾರರ ಸಂಖ್ಯೆ 10,19,550 ಇದೆ. ರಾಜ್ಯದಲ್ಲಿ 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 465 ಎಂದು ಮಾಹಿತಿ ತಿಳಿಸಿದ ಅವರು, ಹೊಸದಾಗಿ ಹೆಸರು ಸೇರಿಸಲು, ಹೆಸರನ್ನು ತಿದ್ದಪಡಿ ಮಾಡಲು, ಸೆ.1ರಿಂದ ಅ.15ರ ವರೆಗೆ ವಿಶೇಷ ಪರಿಷ್ಕರಣಾ ಅಭಿಯಾನ ಕೈಗೊಳ್ಳಲಾಗಿದೆ. ಹೀಗಾಗಿ ಇಂತಹ ಅವಕಾಶವನ್ನು ಬಳಸಿಕೊಳ್ಳುವಂತೆ ತಿಳಿಸಿದರು.

No comments

Post a Comment